ನಮ್ಮ ಬಗ್ಗೆ

2019 ರಲ್ಲಿ, 10-ಕುಟುಂಬ 18-ಗೋತ್ರ ಗೌಡ ಜನಾಂಗದ ವಧು-ವರರಿಗೆ ಸೂಕ್ತ ಜೀವನ ಸಂಗಾತಿಯನ್ನು ಹುಡುಕಲು ಅನುಕೂಲವಾಗುವಂತೆ ‘ಚಪ್ಪರ’ (Chappara.com) ಎಂಬ ಪ್ರತ್ಯೇಕ ವೇದಿಕೆಯನ್ನು ಪ್ರಾರಂಭಿಸಲಾಯಿತು. ಇಂದು ನಮ್ಮ ಈ ವೇದಿಕೆಯು 2,500 ಕ್ಕೂ ಹೆಚ್ಚು ನೋಂದಾಯಿತ ಸದಸ್ಯರನ್ನು ಹೊಂದಿರುವ ಬೃಹತ್ ಕುಟುಂಬವಾಗಿ ಬೆಳೆದಿದೆ. ನಮ್ಮ ಮೇಲಿನ ನಿರಂತರ ನಂಬಿಕೆ, ಬೆಂಬಲ ಹಾಗೂ ಪ್ರೋತ್ಸಾಹಕ್ಕೆ ನಾವು ಸದಾ ಆಭಾರಿಯಾಗಿದ್ದೇವೆ.

ಸ್ಥಾಪನೆ ಮತ್ತು ಸಂಸ್ಥಾಪಕರ ಕುರಿತು

Pushparaj Kunjathadi
ಪುಷ್ಪರಾಜ್ ಕುಂಜತ್ತಾಡಿ (Pushparaj Kunjathadi)
ಸಂಸ್ಥಾಪಕರು, ಚಪ್ಪರ ಮ್ಯಾಟ್ರಿಮೋನಿ

ಪುಷ್ಪರಾಜ್ ಕುಂಜತ್ತಾಡಿ ಅವರು ಚಪ್ಪರ ಮ್ಯಾಟ್ರಿಮೋನಿಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಇವರು ವಾಸ್ತುಶಿಲ್ಪ ವಿನ್ಯಾಸ ಸಂಸ್ಥೆ ‘ಕ್ಯಾಲಿಡ್ಸ್’ (calids.com) ಮತ್ತು ಲ್ಯಾಂಡ್‌ಸ್ಕೇಪಿಂಗ್ ಸಂಸ್ಥೆ Rosea Landscape Private Limited ಸಹ-ಸಂಸ್ಥಾಪಕರೂ ಆಗಿದ್ದಾರೆ.

ಸಾಮಾಜಿಕ ಕಳಕಳಿಯಿಂದಾಗಿ ಇವರು, 2019 ರಿಂದ “CALIDS” ಸಂಸ್ಥೆಯ ಮೂಲಕ ಚಪ್ಪರ ವಧು-ವರರ ವೇದಿಕೆಗೆ ಸಂಪೂರ್ಣ ಬೆಂಬಲ ಮತ್ತು ಆರ್ಥಿಕ ನೆರವು ನೀಡುತ್ತಾ ಬಂದಿದ್ದರು. ಇವರ ಈ ನೆರವಿನಿಂದಾಗಿ ಇಲ್ಲಿಯವರೆಗೆ ಈ ವೇದಿಕೆಯು ಸಮುದಾಯಕ್ಕೆ ಉಚಿತವಾಗಿ ಲಭ್ಯವಿತ್ತು. ಜೂನ್ 2026 ರಿಂದ ವೇದಿಕೆಯ ನಿರ್ವಹಣೆಯನ್ನು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ) ಬೆಂಗಳೂರು ವಹಿಸಿಕೊಳ್ಳಲಿದೆ.

Dayanand Kumblady
ದಯಾನಂದ್ ಕುಂಬ್ಲಾಡಿ (Dayanand Kumblady)
ಸಹ-ಸಂಸ್ಥಾಪಕರು, ಚಪ್ಪರ ಮ್ಯಾಟ್ರಿಮೋನಿ

ದಯಾನಂದ್ ಕುಂಬ್ಲಾಡಿ ಅವರು ಚಪ್ಪರ ಮ್ಯಾಟ್ರಿಮೋನಿಯ ಸಹ-ಸಂಸ್ಥಾಪಕರು. ಇವರು ‘ಡಿಕೆ ಪ್ರಿಂಟ್ಸ್’ (DK Prints) ಎಂಬ ಮುದ್ರಣ ಉದ್ಯಮವನ್ನು ನಡೆಸುತ್ತಿರುವ ಯಶಸ್ವಿ ಉದ್ಯಮಿ ಹಾಗೂ ಇವರು ಕೆ.ಡಿ.ಕೆ (KDK) ಗೌಡ ಸಮಾಜದ ನಿರ್ದೇಶಕರೂ ಹೌದು.

ಸಮುದಾಯದೊಂದಿಗಿನ ಇವರ ಉತ್ತಮ ಒಡನಾಟ ಮತ್ತು ಸಾಮಾಜಿಕ ಕಾರ್ಯಗಳ ಮೇಲಿನ ಆಸಕ್ತಿಯು, ಚಪ್ಪರ ಮ್ಯಾಟ್ರಿಮೋನಿಯನ್ನು ವಿಶ್ವಾಸಾರ್ಹ ಹಾಗೂ ಸಮುದಾಯ-ಸ್ನೇಹಿ ವೇದಿಕೆಯಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಹೊಸ ರೂಪದಲ್ಲಿ ‘ಚಪ್ಪರ’ದ ಪುನರಾರಂಭ:

ಸಮಯಕ್ಕೆ ತಕ್ಕಂತೆ ಬದಲಾಗುತ್ತಾ, ವಧು-ವರರ ಹುಡುಕಾಟವನ್ನು ಮತ್ತಷ್ಟು ಸುಗಮ ಹಾಗೂ ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ನಮ್ಮ ವೆಬ್‌ಸೈಟ್ ಅನ್ನು ಸಂಪೂರ್ಣವಾಗಿ ಆಧುನಿಕ ಸ್ಪರ್ಶದೊಂದಿಗೆ ಉನ್ನತೀಕರಿಸಲಾಗುತ್ತಿದೆ. ಈಗ ನಿಮಗೆ ಅತ್ಯಂತ ವೇಗವಾದ ಹಾಗೂ ಸುಲಭವಾಗಿ ಬಳಸಬಹುದಾದ ಹೊಸ ಅನುಭವ ದೊರೆಯಲಿದೆ.

ಹೊಸ ಒಡಂಬಡಿಕೆ:

2026 ರ ಜೂನ್ 21 ರಿಂದ ಚಪ್ಪರ ವೇದಿಕೆಯನ್ನು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ) ಬೆಂಗಳೂರುರವರ ಪೂರ್ಣ ಉಸ್ತುವಾರಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಸಮಾಜದ ಅಧ್ಯಕ್ಷರಾದ ಶ್ರೀ ಪಳಂಗಪ್ಪ ಪಾಣತ್ತಲೆ ಮತ್ತು ಉಪಾಧ್ಯಕ್ಷರಾದ ಶ್ರೀ ನಾಗೇಶ್ ಕುಮಾರ್ ಕಲ್ಲುಮುಟ್ಲು ರವರ ನಾಯಕತ್ವದಲ್ಲಿ ಹಾಗೂ ಸಮಾಜದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಯುವ ಘಟಕದ ಪದಾಧಿಕಾರಿಗಳ ಸಹಕಾರದಿಂದ ಸಮುದಾಯಕ್ಕೆ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವ ಉದ್ದೇಶದಿಂದ ಚಪ್ಪರ ಮ್ಯಾಟ್ರಿಮೋನಿ ಯನ್ನು ಉನ್ನತಿಕರಿಸಲು ನಾವು ನಿರ್ಧರಿಸಿದ್ದೇವೆ. ಈ ವೇದಿಕೆಯು ನೈತಿಕ ಮತ್ತು ಸಮುದಾಯದ ಸ್ವಾಮ್ಯ ದಲ್ಲಿರುವ ಸೇವೆಯಾಗಿ ಮುಂದುವರೆಯಲಿದೆ.

Contact us