ಚಪ್ಪರ.com ನ ನಿಯಮಗಳು
- ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಚಪ್ಪರ.com ನಲ್ಲಿ ವಧು-ವರರ ಅನ್ವೇಷಣೆಯ ನೋಂದಾವಣೆ ಶುಲ್ಕ 500/- ರೂಪಾಯಿ ಮಾತ್ರ ಸ್ವೀಕರಿಸಲಾಗುವುದು.
- ಚಪ್ಪರ.com ನ ನೋಂದಾವಣೆ ಶುಲ್ಕವು online ಮುಖಾಂತರ ಮಾತ್ರ ಸ್ವೀಕರಿಸಲಾಗುವುದು.
- ನಿಗದಿಪಡಿಸಿರುವ ಶುಲ್ಕವನ್ನು ಹೊರತುಪಡಿಸಿ ಹೆಚ್ಚಿನ ಹಣವನ್ನು ನೀಡಿದರೆ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಚಪ್ಪರ.com ಜವಾಬ್ದಾರಿಯಾಗುವುದಿಲ್ಲ.
- ಚಪ್ಪರ.com ನಲ್ಲಿ ನೋಂದಾವಣೆ ಶುಲ್ಕ ಪಾವತಿಸಿದ ನಂತರ ನೋಂದಾವಣೆ ದಿನದಿಂದ ಒಂದು ವರ್ಷದ ಅವಧಿಗೆ ನೋಂದಾವಣೆ ಚಾಲ್ತಿಯಲ್ಲಿರುತ್ತದೆ. ಒಂದು ವರ್ಷದ ನಂತರ ಚಪ್ಪರ.com ನಲ್ಲಿ ಮುಂದುವರಿಸಲು ಇಚ್ಚಿಸಿದ್ದಲ್ಲಿ, ಪುನಃ ಹೊಸದಾಗಿ ನಿಗದಿಪಡಿಸಿದ ಶುಲ್ಕವನ್ನು ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ.
- 10 ಕುಟುಂಬ 18 ಗೋತ್ರದ ಬಂಧು-ಬಾಂಧವರಿಗೆ ಮಾತ್ರ ಚಪ್ಪರ.com ನಲ್ಲಿ ಹೆಸರನ್ನು ನೋಂದಾಯಿಸಲು ಅವಕಾಶವಿದೆ. 10 ಕುಟುಂಬ 18 ಗೋತ್ರದ ಹೊರತುಪಡಿಸಿ ಅನ್ಯರು ಯಾರಾದರೂ ನಮ್ಮ ಗಮನಕ್ಕೆ ಬಾರದೆ ಹೆಸರನ್ನು ನೋಂದಾಯಿಸಿಕೊಂಡಲ್ಲಿ ಅವರ ನೋಂದಾವಣೆಯನ್ನು ಚಪ್ಪರ. com ನಿಂದ ತೆಗದು ಹಾಕುವ ಹಕ್ಕನ್ನು ಸಮಾಜದ ಆಡಳಿತ ಮಂಡಳಿಯು ಹೊಂದಿರುತ್ತದೆ. ಮತ್ತು ನೋಂದಾವಣೆ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ..
- ಚಪ್ಪರ.com ನಲ್ಲಿ ಹೆಸರು ನೋಂದಾಯಿಸುವವರು 10 ಕುಟುಂಬ 18 ಗೋತ್ರದವರು ಅಲ್ಲವೆಂದು ಕಂಡುಬಂದಲ್ಲಿ ಸಮಾಜದ ಆಡಳಿತ ಮಂಡಳಿಯು ಕೇಳುವ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಸಮಾಜವು ಬಯಸಿದ ದಾಖಲೆಗಳನ್ನು ನೀಡದಿದ್ದ ಪಕ್ಷದಲ್ಲಿ ಅವರ ನೋಂದಾವಣೆಯನ್ನು ಚಪ್ಪರ.com ನಿಂದ ತೆಗೆದುಹಾಕುವ ಹಕ್ಕನ್ನು ಸಮಾಜದ ಆಡಳಿತ ಮಂಡಳಿಯು ಹೊಂದಿರುತ್ತದೆ.
- ಚಪ್ಪರ.com ನಲ್ಲಿ ಹೆಸರು ನೋಂದಾಯಿಸಿಕೊಳ್ಳುವವರು ಸರಕಾರ (ನ್ಯಾಯಾಲಯದ) ಅಧಿನಿಯಮದ ಪ್ರಕಾರ ಹುಡುಗ ಮತ್ತು ಹುಡುಗಿಯ ಮದುವೆಯ ವಯಸ್ಸು ಆದವರು ಮಾತ್ರ ಹೆಸರನ್ನು ನೋಂದಾಯಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ತಪ್ಪು ಮಾಹಿತಿ ನೀಡಿ ಹೆಸರನ್ನು ನೋಂದಾಯಿಸಿಕೊಂಡು ಅದರಿಂದ ಆಗುವ ತೊಂದರೆ ಮತ್ತು ಕಾನೂನಿನ ವಿರುದ್ಧವಾಗಿ ನಡೆದುಕೊಂಡಲ್ಲಿ ಅದರಿಂದ ಆಗುವ ಕಾನೂನಿನ ಶಿಕ್ಷೆಗೆ, ಸಮಾಜದ ಆಡಳಿತ ಮಂಡಳಿಗೂ ಯಾವುದೇ ಸಂಬಂಧ ಇರುವುದಿಲ್ಲ.
- ಚಪ್ಪರ.com ನಲ್ಲಿ ಒಂದೇ (ವ್ಯಕ್ತಿಯ) ಹೆಸರು ಪದೇ ಪದೇ ನೋಂದಾಯಿಸಲ್ಪಟ್ಟಿದ್ದಲ್ಲಿ ಸಮಾಜದ ಆಡಳಿತ ಮಂಡಳಿಯು ಮುಂಚಿತವಾಗಿ ಯಾವುದೇ ಮುನ್ಸೂಚನೆ ನೀಡದೆ ಅಂತಹ ಹೆಸರುಗಳನ್ನು ರದ್ದುಪಡಿಸುವ ಹಕ್ಕನ್ನು ಹೊಂದಿರುತ್ತದೆ.
- ಚಪ್ಪರ.com ಕೇವಲ ಹೆಸರನ್ನು ನೋಂದಾಯಿಸುವ ವೇದಿಕೆ. ವಧು-ವರರ ಮಾಹಿತಿಯನ್ನು online ನಲ್ಲಿ ನೀಡುವ ಕೆಲಸವನ್ನಷ್ಟೇ ಮಾಡುತ್ತಿರುತ್ತದೆ. ಚಪ್ಪರ.com ನಲ್ಲಿ ಹೆಸರನ್ನು ನೋಂದಾಯಿಸಿದ ನಂತರ, ಪರಸ್ಪರ ಒಪ್ಪಿಗೆಯಾಗಲಿ ಆಗದಿರಲಿ ಶುಲ್ಕವನ್ನು ಹಿದಿರುಗಿಸಲಾಗುವುದಿಲ್ಲ. ಹಾಗೂ ಇತರ ಯಾವುದೇ ಜವಾಬ್ದಾರಿಯನ್ನು ಸಮಾಜ ವಹಿಸಿಕೊಳ್ಳುವುದಿಲ್ಲ.
- ಚಪ್ಪರ.com, ಭಾವಿ-ವಧು ವರರ ಹೆಸರನ್ನು ನೋಂದಾಯಿಸಿಕೊಂಡ ನಂತರ ತಮ್ಮ ಆಯ್ಕೆಯ ಬಗ್ಗೆ ಚಪ್ಪರ.com ಯಾವುದೇ ಭರವಸೆ (Guarantee) ನೀಡುವುದಿಲ್ಲ.
- ಚಪ್ಪರ.com ನಲ್ಲಿ ಕಾಣಿಸುವ ಪ್ರೊಫೈಲ್ಗಳಲ್ಲಿನ ವಿದ್ಯಾರ್ಹತೆ, ಉದ್ಯೋಗ, ಆರ್ಥಿಕ ಸ್ಥಿತಿ, ಆರೋಗ್ಯ ಸ್ಥಿತಿ, ಕುಟುಂಬ ಹಿನ್ನೆಲೆ, ಜಾತಕ, ಗೋತ್ರ, ವೈವಾಹಿಕ ಸ್ಥಿತಿ ಮತ್ತು ಇತರ ಎಲ್ಲಾ ಮಾಹಿತಿಗಳನ್ನು ಸಂಬಂಧಪಟ್ಟವರು ಸ್ವತಃ ಪರಿಶೀಲಿಸಿಕೊಳ್ಳಬೇಕು. ಚಪ್ಪರ.com ಅಥವಾ ಸಮಾಜದ ಆಡಳಿತ ಮಂಡಳಿ ಈ ಮಾಹಿತಿಯ ಸತ್ಯಾಸತ್ಯತೆ ಬಗ್ಗೆ ಯಾವುದೇ ಭರವಸೆ ನೀಡುವುದಿಲ್ಲ.
- ಚಪ್ಪರ.com ನಲ್ಲಿ ಒಮ್ಮೆ ಪ್ರೊಫೈಲ್ ನೋಂದಾವಣೆಯಾದ ನಂತರ ಮಾಹಿತಿಯನ್ನು ಸಂಗ್ರಹಿಸಿಡಲಾಗುವುದು ಮತ್ತು ಅದನ್ನು ನಮ್ಮ ಡೇಟಾಬೇಸ್ಗಳಲ್ಲಿ ಕಾಪಾಡಿಕೊಳ್ಳಲಾಗುತ್ತದೆ.
- ಚಪ್ಪರ.com ನಲ್ಲಿ ನೋಂದಾಯಿಸಿದ ಸದಸ್ಯರ ವೈಯಕ್ತಿಕ ಮಾಹಿತಿಯನ್ನು ಯಾವುದೇ ಅನ್ಯ ಉದ್ದೇಶಕ್ಕೆ ಅಥವಾ ಮೂರನೇ ವ್ಯಕ್ತಿಗಳಿಗೆ ನೀಡಲಾಗುವುದಿಲ್ಲ. ಮಾಹಿತಿಯ ಸಂರಕ್ಷಣೆ ನಮ್ಮ ಆದ್ಯತೆ. ಚಪ್ಪರ.com ನ ಸಮಿತಿಯು ಯಾವುದೇ ವೈಯಕ್ತಿಕ ಮಾಹಿತಿಯನ್ನು ಯಾರೊಡನೆಯೂ ಹಂಚಿಕೊಳ್ಳುವುದಿಲ್ಲ. ಹಾಗೂ ಈ ಬಗ್ಗೆ ವೈಯಕ್ತಿಕ ಮಾಹಿತಿಗಾಗಿ ಸಮಾಜವನ್ನು ಸಂಪರ್ಕಿಸುವ ಹಾಗಿಲ್ಲ.
- ಫೋಟೋ ಮತ್ತು ದಾಖಲೆಗಳ ನೀತಿ: ಚಪ್ಪರ.com ನಲ್ಲಿ ಅಪ್ಲೋಡ್ ಮಾಡುವ ಫೋಟೋಗಳು, ದಾಖಲೆಗಳು ಮತ್ತು ಮಾಹಿತಿಗಳು ಸಂಬಂಧಪಟ್ಟ ವ್ಯಕ್ತಿಯ ಅನುಮತಿಯೊಂದಿಗೆ ನೀಡಲ್ಪಟ್ಟಿವೆ ಎಂದು ನೋಂದಾಯಿಸುವವರು ದೃಢೀಕರಿಸುತ್ತಾರೆ. ಅನುಮತಿಯಿಲ್ಲದೆ ಇತರರ ಫೋಟೋ, ದಾಖಲೆ ಅಥವಾ ಮಾಹಿತಿಯನ್ನು ಬಳಸಿದರೆ ಅದರಿಂದ ಉಂಟಾಗುವ ಕಾನೂನು ಹಾಗೂ ಇತರ ಎಲ್ಲಾ ಜವಾಬ್ದಾರಿಗಳು ನೋಂದಾಯಿಸುವವರದ್ದೇ ಆಗಿರುತ್ತದೆ.
- ಫೋಟೋಗಳ ದುರ್ಬಳಕೆಯ ಬಗ್ಗೆ ಎಚ್ಚರಿಕೆ: ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವ ಫೋಟೋಗಳ ಸುರಕ್ಷತೆಗೆ ನಾವು ಆದ್ಯತೆ ನೀಡುತ್ತೇವೆ. ಆದರೂ, ಆ ಫೋಟೋಗಳನ್ನು ಡೌನ್ಲೋಡ್ ಅಥವಾ ಸ್ಕ್ರೀನ್ಶಾಟ್ (Screenshot) ತೆಗೆದುಕೊಂಡು ಬೇರೆಡೆ ದುರ್ಬಳಕೆ ಮಾಡಿದರೆ ಅದಕ್ಕೆ ಚಪ್ಪರ.com ಆಡಳಿತ ಮಂಡಳಿ ಜವಾಬ್ದಾರಿಯಾಗುವುದಿಲ್ಲ. ಸದಸ್ಯರು ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುವಾಗ ಈ ಬಗ್ಗೆ ಅರಿವು ಹೊಂದಿರಬೇಕು.
- ಚಪ್ಪರ.com ನಲ್ಲಿ ಭಾವಿ-ವಧು-ವರರ ಹೆಸರು ನೋಂದಾವಣೆ ಆದ ನಂತರ ಹುಡುಗನ ಅಥವಾ ಹುಡುಗಿಯ ವೈಯಕ್ತಿಕ ಮಾಹಿತಿ ದೊರೆಯುತ್ತದೆ. ಆದರೆ ಸಂಪರ್ಕದ ಮಾಹಿತಿಯನ್ನು/ಸಂಖ್ಯೆಯನ್ನು ಗೌಪ್ಯವಾಗಿ ಇಡಲಾಗುವುದು. ಹುಡುಗ ಮತ್ತು ಹುಡುಗಿಯ ಎರಡು ಕಡೆಯಿಂದ ಪರಸ್ಪರ ಒಪ್ಪಿಗೆಯಾದ ನಂತರವೇ ಮೊಬೈಲ್ (ಸಂಪರ್ಕ) ಸಂಖ್ಯೆ ದೊರೆಯುತ್ತದೆ. ಆದರೆ ಎರಡು ಕಡೆಯವರು ಒಪ್ಪಿಗೆ ಸೂಚಿಸುವ ಮೊದಲು , ತಾವುಗಳು ಹೆಚ್ಚಿನ ಮಾಹಿತಿ, ನೈಜ ಸಂಗತಿಯನ್ನು, ಜವಾಬ್ದಾರಿಯನ್ನು ತಿಳಿದುಕೊಂಡು ಸೂಕ್ತವಾಗಿದೆಯೆಂದು ಖಚಿತಪಡಿಸಿಕೊಂಡು ಮುಂದುವರಿಯಬೇಕು.
- ಪಾಸ್ವರ್ಡ್ ಮತ್ತು ಖಾತೆಯ ಭದ್ರತೆ: ತಮ್ಮ ಖಾತೆಯ ಲಾಗಿನ್ ಐಡಿ (Login ID) ಮತ್ತು ಪಾಸ್ವರ್ಡ್ (Password) ಅನ್ನು ಗೌಪ್ಯವಾಗಿಟ್ಟುಕೊಳ್ಳುವುದು ಆಯಾ ಸದಸ್ಯರ ಜವಾಬ್ದಾರಿಯಾಗಿರುತ್ತದೆ. ಬೇರೆಯವರು ನಿಮ್ಮ ಖಾತೆಯನ್ನು ಬಳಸಿದರೆ ಅದರಿಂದ ಉಂಟಾಗುವ ಪರಿಣಾಮಗಳಿಗೆ ಸಮಾಜವು ಹೊಣೆಯಾಗುವುದಿಲ್ಲ.
- ಚಪ್ಪರ.com ನಲ್ಲಿ ನೋಂದಾವಣೆಯಾದ ನಂತರ ವಧು-ವರರ ಮಧ್ಯದಲ್ಲಿ ಏನೇ ಭಿನ್ನಾಭಿಪ್ರಾಯಗಳು (ತೊಂದರೆ) ಬಂದರೂ ಸಮಾಜದ ಆಡಳಿತ ಮಂಡಳಿಯವರು ಸರಿಪಡಿಸುವ ಜವಾಬ್ದಾರಿಯನ್ನು ವಹಿಸುವಂತೆ ಕೇಳಲು ಯಾರಿಗೂ ಹಕ್ಕಿರುವುದಿಲ್ಲ. ಇದಕ್ಕೆ ಸಂಬಂಧಪಟ್ಟ ಯಾವುದೇ ತಕರಾರುಗಳನ್ನು ಚಪ್ಪರ ಸಮಿತಿಯವರು ಕೇಳುವುದಿಲ್ಲ ಮತ್ತು ಆಡಳಿತ ಮಂಡಳಿಯು ಯಾವುದೇ ರೀತಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ.
- ನಡವಳಿಕೆ ಮಾರ್ಗದರ್ಶಿ: ಚಪ್ಪರ.com ನ ಮೂಲಕ ಸಂಪರ್ಕ ಪಡೆದ ನಂತರ ಸದಸ್ಯರು ಅಶ್ಲೀಲ, ಅವಮಾನಕರ ಅಥವಾ ಕಿರುಕುಳ ನೀಡುವ ರೀತಿಯ ಸಂದೇಶಗಳನ್ನು ಕಳುಹಿಸಿದಲ್ಲಿ, ಅಂತಹ ಸದಸ್ಯರ ಹೆಸರನ್ನು ತಕ್ಷಣ ರದ್ದುಪಡಿಸಲಾಗುವುದು ಮತ್ತು ಕಾನೂನು ಕ್ರಮ ಜರುಗಿಸಲಾಗುವುದು.
- ಮದುವೆ ನಿಶ್ಚಯವಾದ ನಂತರ ಪ್ರೊಫೈಲ್ ತೆಗೆಯುವ ನಿಯಮ: ಚಪ್ಪರ.com ನಲ್ಲಿ ನೋಂದಾಯಿಸಿದ ವ್ಯಕ್ತಿಯ ಮದುವೆ ನಿಶ್ಚಯವಾದ ತಕ್ಷಣ ಸಮಾಜದ ಆಡಳಿತ ಮಂಡಳಿಗೆ ತಿಳಿಸಿ ತಮ್ಮ ಪ್ರೊಫೈಲ್ ಅನ್ನು ತೆಗೆಸಿಕೊಳ್ಳುವುದು ಕಡ್ಡಾಯ.
- ಸಂಪರ್ಕಿಸಲು ಒಪ್ಪಿಗೆ: ಚಪ್ಪರ.com ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ, ಆಡಳಿತ ಮಂಡಳಿಯಿಂದ ಬರುವ ಮ್ಯಾಟ್ರಿಮೋನಿಗೆ ಸಂಬಂಧಿಸಿದ ಮಾಹಿತಿ, SMS, WhatsApp, ಅಥವಾ ಇಮೇಲ್ (Email) ಸಂದೇಶಗಳನ್ನು ಹಾಗೂ ಕರೆಗಳನ್ನು ಸ್ವೀಕರಿಸಲು ಸದಸ್ಯರು ತಮ್ಮ ಒಪ್ಪಿಗೆಯನ್ನು ನೀಡಿದಂತಾಗುತ್ತದೆ.
- ಚಪ್ಪರ.com ನಲ್ಲಿ ಹೆಸರು ನೋಂದಾಯಿಸಲು ತಾಂತ್ರಿಕ ದೋಷಗಳಿದ್ದರೆ, ಚಪ್ಪರ.com ನ Technical Team ಅಥವಾ ಸಮಾಜದ ಆಡಳಿತ ಮಂಡಳಿಯನ್ನು ನಿಗದಿಪಡಿಸಿದ ಸಮಯದಲ್ಲಿ ಸಂಪರ್ಕಿಸಿ ಸಲಹೆಯನ್ನು ಪಡೆಯಬಹುದು.
- ಚಪ್ಪರ.com ನ ಸೇವೆಗಳು ತಾಂತ್ರಿಕ ನಿರ್ವಹಣೆ, server ಸಮಸ್ಯೆ, internet ಸಮಸ್ಯೆ, security update ಅಥವಾ ಇತರ ಅನಿವಾರ್ಯ ಕಾರಣಗಳಿಂದ ಕೆಲವೊಮ್ಮೆ ತಾತ್ಕಾಲಿಕವಾಗಿ ಲಭ್ಯವಿಲ್ಲದಿರಬಹುದು. ಇಂತಹ ತಾಂತ್ರಿಕ ಅಡಚಣೆಗೆ ಚಪ್ಪರ.com ಯಾವುದೇ ನಷ್ಟಪೂರೈಕೆ ಅಥವಾ ಶುಲ್ಕ ಮರುಪಾವತಿ ನೀಡುವುದಿಲ್ಲ.
- ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು, ಇದು ಒಂದು ಲಾಭರಹಿತ ಹಾಗೂ ಶ್ರೇಯೋಭಿವೃದ್ಧಿ ಸಮಾಜವಾಗಿದ್ದು, ನಮ್ಮ ಸಮಾಜವು 62 ವರ್ಷಗಳಿಂದ ನಮ್ಮ ಹಿರಿಯರ, ಪರಿಶ್ರಮ ಮತ್ತು ನಿಷ್ಠವಂತಿಕೆಯಿಂದ ನಡೆಸಿಕೊಂಡು ಬಂದಿದ್ದು, ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ನಮ್ಮ ಸಮಾಜವು ಯಾವುದೇ ಅಪೇಕ್ಷೆಗಳನ್ನು ಬಯಸುವುದಿಲ್ಲ, ಮತ್ತು ಈ ಕೆಲಸದಲ್ಲಿ ಯಾವುದೇ ದಲ್ಲಾಳಿಗಳಿಗೆ ಅವಕಾಶ ನೀಡುವುದಿಲ್ಲ. ತಾವೆಲ್ಲ ಹೆಸರು ನೋಂದಾಯಿಸಿಕೊಂಡು ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂಬುದು ನಮ್ಮ ವಿನಂತಿ. ನೋಂದಾವಣೆ ಶುಲ್ಕ ಹೊರತುಪಡಿಸಿ, ಉಳಿದೆಲ್ಲವೂ ಸಂಪೂರ್ಣ ಉಚಿತವಾಗಿರುತ್ತದೆ. ಇದರ ಪ್ರಯೋಜನ 10 ಕುಟುಂಬ 18 ಗೋತ್ರದ ಬಂಧು-ಬಾಂಧವರಿಗೆ ಮಾತ್ರ. ನಮ್ಮ ಸಮಾಜದ ಈ ಪ್ರಯತ್ನಕ್ಕೆ ತಾವೆಲ್ಲರೂ ಸಂಪೂರ್ಣ ಸಹಕಾರ ನೀಡಿ, ಇದರಿಂದ ಆಗುವ ಪ್ರಯೋಜನವನ್ನು ನಮ್ಮ ಜನಾಂಗದ ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂಬುವುದು ನಮ್ಮ ಸಮಾಜದ ಆಶಯ. ಇದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ.
- ನಿಯಮಗಳ ತಿದ್ದುಪಡಿಯ ಹಕ್ಕು: ಚಪ್ಪರ.com ನ ಆಡಳಿತ ಮಂಡಳಿಯು ಅಗತ್ಯಕ್ಕೆ ತಕ್ಕಂತೆ ಯಾವುದೇ ಸಮಯದಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡುವ ಹಕ್ಕನ್ನು ಹೊಂದಿರುತ್ತದೆ. ತಿದ್ದುಪಡಿಯ ನಂತರ ಅದು ಎಲ್ಲಾ ಸದಸ್ಯರಿಗೆ ಅನ್ವಯಿಸುತ್ತದೆ. ಚಪ್ಪರ.com ತನ್ನ ನಿಯಮಗಳು, ಶುಲ್ಕ, ಸೇವಾ ವಿಧಾನ, privacy policy ಮತ್ತು ಇತರ ಷರತ್ತುಗಳನ್ನು ಕಾಲಕಾಲಕ್ಕೆ ಬದಲಾಯಿಸುವ ಅಥವಾ ನವೀಕರಿಸುವ ಹಕ್ಕನ್ನು ಹೊಂದಿರುತ್ತದೆ. ಬದಲಾವಣೆ ಮಾಡಿದ ನಂತರ ಚಪ್ಪರ.com ನಲ್ಲಿ ಮುಂದುವರಿದು ಸೇವೆಯನ್ನು ಬಳಸುವುದರಿಂದ ಆ ಬದಲಾವಣೆಗಳಿಗೆ ಒಪ್ಪಿಗೆ ನೀಡಿದಂತೆ ಪರಿಗಣಿಸಲಾಗುತ್ತದೆ.
- ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಚಪ್ಪರ.com ನ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದ ಕಾನೂನು ನಿಯಮಗಳು ಬೆಂಗಳೂರು ಜ್ಯೂರಿಸ್ಡಿಕ್ಷನ್ ನಲ್ಲಿ ಒಳಪಟ್ಟಿರುತ್ತದೆ.
- ದೃಢೀಕರಣ: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಚಪ್ಪರ.com ನಲ್ಲಿ ಹೆಸರು ಅಳವಡಿಸಿದ ಮೇಲಿನ ಎಲ್ಲಾ ವಿಚಾರ, ನಿಯಮಗಳು ಮತ್ತು ಸಮಾಜದ ಎಲ್ಲಾ ವಿಷಯಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡಿದ್ದು ಎಲ್ಲಾ ನಿಯಮಗಳಿಗೆ ಬದ್ಧನಾಗಿ ನಾನು ಚಪ್ಪರ.com ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಒಪ್ಪಿದ್ದೇನೆ. ಹಾಗೂ ಚಪ್ಪರ.com ನ ನಿಯಮಗಳನ್ನು ಪಾಲಿಸುತ್ತೇನೆ ಎಂದು ದೃಢೀಕರಿಸುತ್ತೇನೆ.
