Important Announcement

ಬಾವಿ ವಧು-ವರರ ಅನ್ವೇಷಣೆಯ ನವೀಕೃತ ಅಂತರ್ಜಾಲತಾಣ ಬಿಡುಗಡೆ.

Date: June 15, 2026 Location: Bengaluru Organizer: KDK Gowda Samaja

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ) ಬೆಂಗಳೂರು, ಇವರ ವತಿಯಿಂದ ಸಮಾಜದ ಸದಸ್ಯರಾದ ಶ್ರೀ ಪುಷ್ಪರಾಜ್ ಕುಂಜತ್ತಾಡಿ ಮತ್ತು ದಯಾನಂದ ಕುಂಬ್ಲಾಡಿರವರು ಅಭಿವೃದ್ಧಿಪಡಿಸಿದ 10 ಕುಟುಂಬ 18 ಗೋತ್ರದ ಗೌಡ ಜನಾಂಗದ ಕುಟುಂಬ ಬಾಂಧವರ ಬಾವಿ ವಧು-ವರರ ಅನ್ವೇಷಣೆ ನವೀಕೃತ ಅಂತರಜಾಲ ತಾಣ ಚಪ್ಪರ.comನ್ನು ದಿನಾಂಕ 15- 06.2026 ರಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾದ ಶ್ರೀ ಡಿ.ವಿ.ಸದಾನಂದ ಗೌಡರವರ ದಿವ್ಯ ಹಸ್ತದಿಂದ ಬಿಡುಗಡೆಗೊಳಿಸಲಾಯಿತು. ಅಂತರ್ಜಾಲ ತಾಣ ಬಿಡುಗಡೆ ಸಂದರ್ಭದಲ್ಲಿ ಮಾತನಾಡುತ್ತಾ ಎಲ್ಲಾ ಸಮಾಜಗಳು ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಸಮಾಜಕ್ಕೆ ನೀಡುವುದರಿಂದ ಸಮಾಜದ ಏಳಿಗೆ ಆಗುತ್ತದೆ ಎಂದು ತಿಳಿಸಿದರು.ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಬೆಂಗಳೂರು, ಇವರು ಇಂತಹ ಹಲವಾರು ಜನಪರ ಕಾರ್ಯಕ್ರಮಗಳನ್ನು ಸಮುದಾಯಕ್ಕೆ ನೀಡುತ್ತಾ ಬಂದಿದ್ದು ಈ ಸಮಾಜ ಎಲ್ಲಾ ಸಮಾಜಗಳಿಗೆ ಮಾದರಿಯಾಗಿದೆ ಎಂದು ಪ್ರಶಂಶಿಸಿದರು. ಅಂತರ್ಜಾಲ ತಾಣದ ಸದುಪಯೋಗವನ್ನು ಸಮಾಜದ ಎಲ್ಲಾ ಬಾಂಧವರು ಪಡೆಯಬೇಕೆಂದು ಕರೆ ನೀಡಿದರು.

Contact us